ಸ್ಥಳೀಯ ಪತ್ರಿಕೆ ಕೇಬಲ್ ಚಾನೆಲ್ ರಾಜ್ಯ ಮಟ್ಟದ ಪತ್ರಿಕೆ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಗಳಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿದ್ದೇನೆ
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಎಂದು ನ್ಯೂಸ್ ಚಾನೆಲ್ ದುನಿಯಾದಿಂದ ಹೊರಬಂದು “ವಾಸ್ತವ ವಾಣಿ” ನ್ಯೂಸ್ ಕನ್ನಡ, ವನ್ನು ಕಟ್ಟಿದ್ದೇನೆ
ಮಾಧ್ಯಮ ಲೋಕಕ್ಕೆ ಕಾಲಿಟ್ಟು 10 ವರ್ಷಕ್ಕೂ ಹೆಚ್ಚು ಕಾಲದ ಅನುಭವದಲ್ಲಿ ಈಗಿನ ಪೇಪರ್ ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ನೀಡಬೇಕು ಎನ್ನುವ ಹಂಬಲವಿದ್ದು ಅದರ ಪ್ರಯತ್ನ ನಿರಂತರವಾಗಿದೆ
ಉತ್ತಮ ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ ನೀಡುವುದರ ಮೂಲಕ ಸುದ್ದಿಯಲ್ಲಿ ನನ್ನ ಅಭಿಪ್ರಾಯ ಹೇಳುವುದು ಇಷ್ಟವಿಲ್ಲ ಇದ್ದದ್ದು ಇದ್ದ ಹಾಗೆ ಬಿತ್ತರಿಸುವುದೇ ನನ್ನ ಕೆಲಸ
ಸುದ್ದಿಯನ್ನು ಸುದ್ದಿಯಾಗಿಯೇ ಕೊಡಬೇಕು ಎಂಬುದು ನನ್ನ ವಾದ ಹೀಗಿದ್ದು ಕೆಲವೊಮ್ಮೆ ಸುದ್ದಿಯಕೆಳಗೆ “ಡ್ಯಾಶ್ ಡ್ಯಾಶ್” ಅಂತೆಲ್ಲಾ ಕಾಮೆಂಟ್ಗಳು ಬರುತ್ತವೆ ಆದರೂ ಪರವಾಗಿಲ್ಲ ಯಾವುದಕ್ಕೂ ನಾನು ರಿಯಾಕ್ಟ್ ಮಾಡಲ್ಲ
ನಿಮ್ಮೂರಿನ ಸುದ್ದಿಗಳಿದ್ದರೆ ತಿಳಿಸಿ ಹಣ ಪಡೆದು ಸುದ್ದಿ ಮಾಡುವ ಅಭ್ಯಾಸ ಹಾಗೂ ಹವ್ಯಾಸ ಎರಡು ಇಲ್ಲ ಇನ್ನಷ್ಟು ವಿಭಿನ್ನ ಪ್ರಯತ್ನಗಳು ನಿಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಎನ್ನುವ ತವಕವಿದೆ
ಅಂದಹಾಗೆ ಹೊಸ ಆಲೋಚನೆಗಳು ಹಾಗೂ ಹೊಸ ಸಲಹೆಗಳು ಇದ್ದರೆ ತಿಳಿಸಿ
ನನ್ನ ವಾಟ್ಸಪ್ ನಂಬರ್ “86188-1753” ನಿಮ್ಮ ಸ್ನೇಹ ನನಗೆ ಅಮೂಲ್ಯ ನಿಮ್ಮೂರಿನ ಸುದ್ದಿಗಾಗಿ ನಿರಂತರವಾಗಿ “ವಾಸ್ತವ ವಾಣಿ” ಓದಿರಿ ಹಾಗೂ ವೀಕ್ಷಿಸುತ್ತಿರಿ