ಪವಿತ್ರ ರಂಜಾನ್ ಉಪವಾಸದ ಒಂದಿಷ್ಟು ಮಾಹಿತಿ

ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ.

ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ

ಖುರಾನ್ – ಸಂವಿಧಾನ – ಹಿಂದುತ್ವ – ಭಾರತೀಯತೆ – ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ

ಮೂರು ರೀತಿಯ ಭಾವನೆಗಳು ಈಗ ಮೇಲುಗೈ ಪಡೆದು ಚರ್ಚೆಯ ಮುನ್ನೆಲೆಗೆ ಬಂದಿದೆ. ಒಂದು, ಮುಸ್ಲಿಂ ಯಾವುದೇ ದೇಶದಲ್ಲಿರಲಿ ಆತನ ಮೊದಲ ನಿಷ್ಠೆ ಖುರಾನ್ ಎಂಬ ಪವಿತ್ರ ಗ್ರಂಥದ ಆಚರಣೆಯೇ ಮುಖ್ಯವಾಗಬೇಕು.

ಮುಸ್ಲಿಂ ಒಬ್ಬನ ನಿಜವಾದ ಬದುಕು ಇಹದಲ್ಲಿ ಇಲ್ಲ. ಅದು ಅಲ್ಲಾನ ಸ್ವರ್ಗದಲ್ಲಿ ಇದೆ. ಸಾವು ಬದುಕಿಗೆ ಅಲ್ಲಾನೇ ಪ್ರೇರಣೆ ಮತ್ತು ರಕ್ಷಣೆ ಎಂಬ ಮೂಲಭೂತವಾದಿ ಸಿದ್ದಾಂತ,
ಜೊತೆಗೆ ಈ ದೇಶದಲ್ಲಿ ನಾವು ಸಹ ಮೂಲ ನಿವಾಸಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇವೆ.

ನಮಗೂ ಈ ನೆಲದ ಮೇಲೆ ಎಲ್ಲಾ ರೀತಿಯ ಸಮಾನ ಹಕ್ಕುಗಳಿವೆ ಇದು ಖುರಾನ್ ನುಡಿಗಳಲ್ಲ. ಆದರೆ ಮಾಧ್ಯಮ ಚರ್ಚೆಗಳಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ವಾದ ಮತ್ತು ಒಟ್ಟು ಸಾರಾಂಶ ಇದನ್ನು ನೇರವಾಗಿ ಹೇಳದೆ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ.

ಇನ್ನೊಂದು ವರ್ಗ,
ಇದು ಈ ರಾಷ್ಟ್ರವನ್ನು ಜಾತ್ಯಾತೀತ ಆಧಾರದ ಮೇಲೆ ಮುನ್ನಡೆಸಲು ಇಚ್ಚಿಸುತ್ತದೆ.

ಭಾರತಕ್ಕೆ ಮುಸ್ಲಿಮರ ಪ್ರವೇಶ ಯಾವಾಗ ಮತ್ತು ಹೇಗೇ ಆಗಿರಲಿ ಭಾರತದ ವಿಭಜನೆಯ ಕಾರಣ ಏನೇ ಇರಲಿ, ಸ್ವಾತಂತ್ರ್ಯ ನಂತರ ಭಾರತ ಒಂದು ಗಣರಾಜ್ಯಗಳ ಒಕ್ಕೂಟ ಆದ ನಂತರ ಸಂವಿಧಾನಾತ್ಮಕವಾಗಿ ಇಲ್ಲಿನ ಪ್ರಜೆಗಳಾದ ಯಾರೇ ಆಗಿರಲಿ ಅವರಿಗೆ ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳಿವೆ.

ಮುಖ್ಯವಾಗಿ ಅಲ್ಪಸಂಖ್ಯಾತರಾದ ಮುಸ್ಲಿಮರು ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿದ್ದಾರೆ. ಅದನ್ನು ಎಲ್ಲರೂ ಗೌರವಿಸಿ ಅವರನ್ನು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವ ಕೆಲಸ ಆಗಬೇಕು ಎಂಬ ಅಭಿಪ್ರಾಯ ಹೊಂದಿರುವವರು. 

ಗಾಂಧಿಯ ನೈತಿಕತೆ ಮತ್ತು ಅಂಬೇಡ್ಕರ್ ಸಾಮಾಜಿಕತೆ ಇವರ ಚಿಂತನಾ ವಿಧಾನ.

ಇದು ಸನಾತನ ಧರ್ಮದ ನಂಬಿಕೆಗಳ ಮೇಲೆ ನಿರ್ಮಾಣವಾಗಿರುವ ಹಿಂದೂಗಳ ದೇಶ. ಮದ್ಯದಲ್ಲಿ ಕೆಲವು ಮುಸ್ಲಿಂ ದಾಳಿಕೋರರು ಇದನ್ನು ಆಕ್ರಮಿಸಿಕೊಂಡು ತಮ್ಮ ಸಂತತಿ ಬೆಳೆಯಲು ಕಾರಣವಾದರು. ಸ್ವಾತಂತ್ರ್ಯ ನಂತರ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ರಚನೆಯಾದ ನಂತರವೂ ಗಾಂಧಿಯವರ ಚಿತಾವಣೆಯಿಂದ ಇಲ್ಲೇ ಉಳಿದವರು.

ಮುಂದೆ ಆಡಳಿತ ಮಾಡಿದವರು ಇವರನ್ನು ಅತಿಯಾಗಿ ತುಷ್ಟೀಕರಿಸಿದ ಕಾರಣ ಇಂದು ದೇಶ ಇವರ ಹಿಂಸೆಯಿಂದ ನರಳುತ್ತಿದೆ ಯಾವುದೇ ಕಾರಣಕ್ಕೂ ಅವರು ಮೇಲುಗೈ ಪಡೆಯದೆ ಎರಡನೇ ದರ್ಜೆಯ ಪ್ರಜೆಗಳಾಗೇ ಇರಬೇಕು. ಅವರಿಗೆ ಯಾವುದೇ ವಿಶೇಷ ಸ್ಥಾನಮಾನ ನೀಡಬಾರದು. ಮುಸ್ಲಿಂ ಜನಸಂಖ್ಯೆ ಹೆಚ್ಚಾದರೆ ಹಿಂದೂಗಳಿಗೆ ಅಪಾಯ. ಇದು ಸಂಪೂರ್ಣ ಹಿಂದು ರಾಷ್ಟ್ರ ಎಂಬ ಪ್ರತಿಪಾದನೆ ಇವರದು…

ಇದು ಇಂದಿನ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಸಾಮಾನ್ಯ ಜನರ ಸಾಮಾನ್ಯ ಅಭಿಪ್ರಾಯದ ಒಟ್ಟು ಸಾರಾಂಶ.

ಇದರ ಜೊತೆಗೆ ರಾಜಕೀಯ ಪಕ್ಷಗಳ ಓಟು ಗಳಿಸುವ ತಂತ್ರಗಾರಿಕೆ ಮತ್ತು ಧಾರ್ಮಿಕ ಮುಖಂಡರ ಧರ್ಮದ ಅಫೀಮು ತಿನ್ನಿಸುವಿಕೆಯೂ ಸೇರಿ ಒಂದು ರೀತಿಯ ಗಲಭೆಕೋರ ಮನಸ್ಥಿತಿ ನಿರ್ಮಾಣವಾಗಿದೆ……

ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಜನರ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದೇ ಚರ್ಚೆಯ ಮುಖ್ಯ ವಿಷಯ.

ಸತ್ಯ ಏನೇ ಇದ್ದರು ಈ ಸಮಾಜ ನಡೆಯುವುದು ವಾಸ್ತವ ಪ್ರಜ್ಞೆಯಿಂದಲೇ. ಉಗ್ರ ‌ಹಿಂದುತ್ವವಾದಕ್ಕೆ ತಕ್ಕ ಉತ್ತರ ನೀಡಬೇಕೆಂದರೆ ಅದು ಸಂವಿಧಾನದಿಂದ ಮಾತ್ರ ಸಾಧ್ಯ. ಖುರಾನ್ ನಿಂದ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಆ ಸಮುದಾಯದ ಧಾರ್ಮಿಕ ಮುಖಂಡರು ಮತ್ತು ಪ್ರಜ್ಞಾವಂತರು ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇಲ್ಲದಿದ್ದರೆ ಖುರಾನ್ ಮತ್ತು ಭಗವದ್ಗೀತೆ ಮುಖಾಮುಖಿಯಾಗಿ ಧರ್ಮ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ.

ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಕೆಲವು ಆಚರಣೆಗಳಿಗೆ ಕಾನೂನಿನ ಮಾನ್ಯತೆ ಇದ್ದರೂ ಸಹ ಅವು ಮೌಢ್ಯದ ಸಂಕೇತ ಮತ್ತು ಈ‌ ಆಧುನಿಕ ಕಾಲದಲ್ಲಿ ಅದರ ಅವಶ್ಯಕತೆ ಇಲ್ಲ ಎನಿಸಿದರೆ ಅದನ್ನು ವೈಜ್ಞಾನಿಕ ನೆಲೆಯಲ್ಲಿ ಮೆಟ್ಟಿ ನಿಲ್ಲುವ ಧೈರ್ಯ ತೋರಬೇಕು.

ಉದಾಹರಣೆಗೆ ಕೆಲವು ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡಲಾಗಿದೆ. ಹಾಗೆಯೇ ಇರಾನಿನ ಮಹಿಳೆಯರು ಕಬಡ್ಡಿ ಆಡಲು ಅದಕ್ಕೆ ಅನುಕೂಲಕರ ಬಟ್ಟೆ ತೊಡುತ್ತಾರೆ. ಹೀಗೆ ಇನ್ನೂ ಹಲವಾರು……

ಮುಸ್ಲಿಂ ಸಮುದಾಯ ಪ್ರಜ್ಞಾವಂತ ಮತ್ತು ವೈಚಾರಿಕ ಪ್ರಜ್ಞೆಯ ನಾಯಕತ್ವದ ಕೊರತೆ ಎದುರಿಸುತ್ತಿದೆ. ಅಪರೂಪದ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿದರೆ ಸ್ಥಳೀಯ ಮಟ್ಟದಲ್ಲಿ ಅದು ದುರ್ಬಲವಾಗಿದೆ. ಕೆಲವು ಕಡೆ ಧಾರ್ಮಿಕ ನಾಯಕತ್ವ ಮತ್ತೆ ಕೆಲವು ಕಡೆ ರಾಜಕೀಯ ನಾಯಕತ್ವ ಪ್ರಾಮುಖ್ಯತೆ ಪಡೆಯುತ್ತಿದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನಾಯಕತ್ವ ಬೆಳೆಯುತ್ತಿಲ್ಲ. ಇದು ಹೊಸ ತಲೆಮಾರಿಗೆ ಹೊಸ ರಕ್ತ ಹರಿಯಲು ತೊಡಕಾಗಿದೆ.

ಅತಿ ವೇಗವಾಗಿ ಬೆಳೆಯುತ್ತಿರುವ ಯುವ ಮನಸ್ಸುಗಳಿಗೆ ರೋಲ್ ಮಾಡೆಲ್ ಗಳು ತುಂಬಾ ಅವಶ್ಯಕ. ಇಲ್ಲದಿದ್ದರೆ ಸಿನಿಮಾ ನಟರು ಅಥವಾ ರಾಜಕೀಯ ಅಧಿಕಾರ ಪಡೆದವರು ಆ ಜಾಗ ಆಕ್ರಮಿಸಿದರೆ ಅದು ಹಾದಿ ತಪ್ಪಿದಂತಾಗುತ್ತದೆ. ಏಕೆಂದರೆ ಕೆಲವು ಹಿಂದು ಮೂಲಭೂತವಾದಿ ವಿಭಜಕ ಶಕ್ತಿಗಳು ಕೆಟ್ಟ ಮುಸ್ಲಿಂ ನಾಯಕತ್ವದ ಹುಡುಕಾಟದಲ್ಲಿರುತ್ತವೆ. ಆ ರೀತಿಯ ಮನೋಭಾವದ ವ್ಯಕ್ತಿಗಳನ್ನು ಹುಡುಕಿ ಅವರಿಗೆ ಮುಖ್ಯ ವಾಹಿನಿಯ ಮಾಧ್ಯಮದಲ್ಲಿ ಚರ್ಚೆಗಳ ಮುಖಾಂತರ ವೇದಿಕೆ ಕಲ್ಪಿಸುತ್ತಾರೆ ಮತ್ತು ಅವರಿಗೆ ಉದ್ದೇಶ ಪೂರ್ವಕವಾಗಿಯೇ ಉತ್ತರಿಸಲು ಕಷ್ಟವಾಗುವ ದೇಶ ವಿರೋಧಿ ಅಥವಾ ಧರ್ಮ ವಿರೋಧಿ ಪ್ರಶ್ನೆಗಳನ್ನು ಕೇಳಿ ಗೊಂದಲ ಮೂಡಿಸಿ ಬಹುಸಂಖ್ಯಾತ ಹಿಂದುಗಳು ಕೋಪಗೊಳ್ಳುವಂತೆ ಮಾಡುತ್ತಾರೆ.

ಇದನ್ನು ಮೀರುವ ಭೌದ್ಧಿಕ ಮನೋಭಾವ ಬೆಳೆಸುವ ನಾಯಕತ್ವ ಬೇಕಾಗಿದೆ.

ವರದಿ “ವಿ” ನ್ಯೂಸ್ ಕನ್ನಡ

“I love the scents of winter! For me, it’s all about the feeling you get when you smell pumpkin spice, cinnamon, nutmeg, gingerbread and spruce.”

admin

Writer & Blogger

Related Posts:

1 Comment

  • Totam maxime quis modi praesentium nostrum. consequuntur voluptatum et eum ea. Non quod quisquam sint sit. Ut nihil optio accusamus mollitia voluptatem vel reprehenderit. repellendus harum sapiente consequatur. quas sit doloribus et aliquid eos. Non temporibus eum officiis qui iusto provident. dolorum reiciendis Velit est eveniet error aut quasi. aut consequatur praesentium. dolor sint ut. Eos provident molestias assumenda non non nesciunt Ut sit nam corporis quia.

Leave a Reply

Your email address will not be published. Required fields are marked *

About Me

ನಾನು ನಿಮ್ಮ ಸಂತೋಷ್ ರಾಮ್

ನಾನು ನಿಮ್ಮ ಸಂತೋಷ್ ರಾಮ್
ನಿಮ್ಮ ಸ್ನೇಹ ನನಗೆ ಅಮೂಲ್ಯ ನಿಮ್ಮೂರಿನ ಸುದ್ದಿಗಾಗಿ ನಿರಂತರವಾಗಿ “ವಾಸ್ತವ ವಾಣಿ” ಓದಿರಿ ಹಾಗೂ ವೀಕ್ಷಿಸುತ್ತಿರಿ.

Popular Posts

Newsletter

JOIN THE FAMILY!

Get a Cookbook with our recipes.

You have been successfully Subscribed! Please Connect to Mailchimp first

Sea Adventure

Letter wooded direct two men indeed income sister impression.

Featured Posts

Instagram

Categories

Edit Template

© 2025 All Rights Reserved | Powered By CDA